ಕವ್ನೈ ಕೋಟೆಯು ಭಾರತದ ಮಹಾರಾಷ್ಟ್ರದ, ನಾಸಿಕ್ ಜಿಲ್ಲೆಯ, ಇಗತ್ಪುರಿ ತಾಲೂಕಿನ, ಕವ್ನೈ ಗ್ರಾಮದ, ಉತ್ತರದಲ್ಲಿರುವ ಬೆಟ್ಟದಲ್ಲಿದೆ. ಇಲ್ಲಿ ಸದ್ಯಕ್ಕೆ ಉಳಿದಿರುವ ರಚನೆಗಳು ಎಂದರೆ ಮುಖ್ಯ ದ್ವಾರ ಮತ್ತು ಸಣ್ಣ ಕೊಳ ಮಾತ್ರ. == ಭೂಗೋಳಶಾಸ್ತ್ರ == ಕವ್ನೈ ಗ್ರಾಮವು ಇಗತ್ಪುರಿಗೆ ರಸ್ತೆಯ ಮೂಲಕ ಸಂಪರ್ಕ ಹೊಂದಿದ್ದು, ಇಗತ್ಪುರಿ ೧೮ ಕಿಲೋಮೀಟರ್ ದೂರದಲ್ಲಿದೆ. ಕಪಿಲತೀರ್ಥವು ಸಹ ಕವ್ನೈ ಗ್ರಾಮದ ಸಮೀಪದಲ್ಲಿದೆ. ಕೋಟೆಯು ಆರೋಹಣವು ಪರ್ವತಗಳನ್ನು ಹತ್ತುವ ಮೂಲಕ ಪ್ರಾರಂಭವಾಗುತ್ತದೆ. ಅಂತಿಮ ಆರೋಹಣವು ಲಂಬವಾಗಿದ್ದು, ಕಳಪೆ ಶಿಲೆಯ ಮೆಟ್ಟಿಲುಗಳನ್ನು ಹೊಂದಿದೆ. == ಇತಿಹಾಸ == ಈ ಕೋಟೆಯನ್ನು ಮೊಘಲರು ನಿರ್ಮಿಸಿದರು. ಉದ್ಗೀರ್ ಕದನದ ನಂತರ (೧೭೬೦) ಒಪ್ಪಂದದ ನಿಯಮಗಳ ಅಡಿಯಲ್ಲಿ ಇದನ್ನು ನಿಜಾಮರು ಪೇಶ್ವೆಗಳಿಗೆ ಬಿಟ್ಟುಕೊಟ್ಟರು. ಈ ಕೋಟೆ, ತ್ರಿಂಗಲ್ವಾಡಿ ಮತ್ತು ಇತರ ಹದಿನೈದು ಕೋಟೆಗಳನ್ನು ಕರ್ನಲ್ ಬ್ರಿಗ್ಸ್ ನೇತೃತ್ವದಲ್ಲಿ ಬ್ರಿಟಿಷ್ ಸೇನೆಯು ವಶಪಡಿಸಿಕೊಂಡಿತು. == ನೋಟ == == ಉಲ್ಲೇಖಗಳು ==